Wednesday, September 25, 2013

ಮನವನೊಮ್ಮೆ ಬತ್ತಿಯನೊಮ್ಮೆ 
ಉರಿಸುತ್ತಾ ಹನಿಗೂಡಿತು ಕಣ್ಣು 
ಇರುಳ ಮಡಿಲಲಿ ನೆನಪುಗಳು 
ಒದ್ದೆ ದಿಂಬು.. 

ಜಗವೆಲ್ಲ ಮಲಗಿರಲು
ಕಿಟಿಕಿಯಾಚೆ ನಗುತಿಹ
ಚಂದಿರನಲ್ಲಿ ಕಂಡೆ ಬಿಂಬ
ಮತ್ತೆ ಗಲ್ಲ ಒದ್ದೆಯಾಯಿತು..


ಗಿಡ ಬಾಡಿದರೆ ನೀರು ಬಿಡುವೆನು . 
ಹೃದಯ ಬಾಡಿದರೆ ಕಣ್ಣೀರು ಬಿಡುವೆನು. 
ನೀವು ಬಾಡಿದರೆ ಜೀವವನ್ನೇ ಬಿಡುವೆನು. 
ನೀವು ಖುಷಿಯಾಗಿರಲು ಆಗಾಗ ಈ ಥರ. 
ಸಣ್ಣ 'ರೀಲ್' ಬಿಡುವೆನು!!!!! 

note :-ಫೇಸ್ ಬುಕ್ ನಲ್ಲಿ ಹೆಚ್ಚು ಸಮಯ ಕಳೆದ್ರೆ ಮೆಮೋರಿ ಲಾಸ್ ಆಗುತ್ತೆ ಹುಷಾರ್..!

opinion :-ತೊಂದರೆ ಇಲ್ಲ ಬಿಡಿ ನಿಮ್ಮ ಬಳಿ ಮೆಮೊರಿ ಕಾರ್ಡ್ ಇದೆ ಅಂತ ಕಾಣುತ್ತೆ ನನ್ನ ಬಳಿ ಹಾರ್ಡ್ ಡಿಸ್ಕ್ ಇದೆ ಚಿಂತೆ ಇಲ್ಲ

ಮುದ್ದಾಗಿ ಬಂದ ಸ್ನೇಹ ಹೂವಾಗಿ ಅರಳಲಿ ,
ಹನಿಯಾಗಿ ಬಂದ ಸ್ನೇಹ ಹೊಳೆಯಾಗಿ ಹರಿಯಲಿ ,
ಅರಿಯದೆ ಬಂದ ಸ್ನೇಹ ಮರೆಯದೆ ಉಳಿಯಲಿ

ಪ್ರಸ್ತುತ ಭಾರತದ ಆರ್ಥಿಕ ಪರಿಸ್ಥಿತಿ ನೋಡಿದರೆ 'ಆಧಾರ್ ಕಾರ್ಡ್'ಗಿಂತ 'ಉಧಾರ್ ಕಾರ್ಡ್' ಅವಶ್ಯಕತೆ ಇದೆ ಅಂತ ಅನ್ನಿಸುವದಿಲ್ಲವೇ?!!

"ನಗುವಿನ ಹತ್ತು ಮುಖಗಳು"

ತನ್ನೊಳಗೆ ನಗುವವನು........ಜ್ಝಾನಿ

ತಾನೇ ನಗುವವನು.....ಹುಚ್ಚ

ತನ್ನ ಪ್ರೇಯಸಿಯನ್ನು ನೆನೆದು ನಗುವವನು......ಪ್ರೇಮಿ

ತನ್ನನ್ನೇ ಮೈ ಮರೆತು ನಗುವವನು.....ರಸಿಕ

ಇನ್ನೊಬ್ಬರಿಗಾಗಿ ನಗುವವನು......ಅಯೋಗ್ಯ

ಇನ್ನೊಬ್ಬರನ್ನು ನೋಡಿ ನಗುವವನು......ದುಷ್ಟ

ಇನ್ನೊಬ್ಬರಿಗೆ ನೋವಾಗುವಂತೆ ನಗುವವನು...... ಖಳನಾಯಕ

ನಕ್ಕು ಮನರಂಜನೆಯನ್ನು ನೀಡುವವನು...... ವಿಧೂಷಕ

ನಗುತ್ತಲೇ ಜಯ ಸಾಧಿಸುವವನು...... ಬುದ್ಧಿವಂತ

ಗೆದ್ದರೂ ನಗದವನು..... ಕರ್ಮಯೋಗಿ!!!

ಒಲವೇ,

ನಿನ್ನಿಂದ ದೂರ ನಡೆಯುವುದೆಂದರೆ 

ನನ್ನ ನಾ ಕಳಕೊಂಡಂತೆಯೇ...

ನಿತ್ಯವೂ ನಾ ತೋರುತಿಹ ಹಲವು ಅವತಾರಗಳಲಿ 

ನನ್ನನ್ನು ಹುಡುಕುವಿಯಾದರೆ ನಿನಗೆ ನಿರಾಶೆ ಖಂಡಿತ

ನಾ ಬರೇ ಒಲವಿನ ದಾಸಿ.. ಮತ್ತೇನೂ ಅಲ್ಲ!

ಉಳಿದಿಲ್ಲವೀಗ ಏನೂ ಅಲ್ಲಿ!
___________________

ಅವನ, ಇವನ, ಅವಳ, ಇವಳ
ಆಪಾದನೆಗಳ ಪರ್ವತ ಮನದಂಗಳದಲ್ಲಿ
ಹಿಂದಿನ ನೋವೆಲ್ಲಾ ಮುಗಿಲಾಗಿ
ಮತ್ತೆ ತೇಲಿ ಬಂತೇ

ತಣ್ಣನೆಯ ನಿಟ್ಟುಸಿರು ಹೊಮ್ಮಿತ್ತು
ತಾಗಿದೇ ಕ್ಷಣ ಮೇಘಸ್ಫೋಟ
ಪಕ್ಷವೊಂದು ಪೂರಾ ಎಡಬಿಡದೆ
ಸುರಿಯಿತಲ್ಲಿ ಧಾರಾಕಾರ ವರ್ಷ

ನೋವೂ-ನಲಿವೂ ಕೊಚ್ಚಿಹೋಯಿತು
ಒಲವಿನ ಗರ್ಭಗುಡಿ ಪೊತ್ತ
ಜರ್ಜರಿತ ಕಾಯದ ಹೊರತು
ಉಳಿದಿಲ್ಲವೀಗ ಏನೂ ಅಲ್ಲಿ!

ನಿದ್ದೆ ಮನುಷ್ಯನಿಗೆ ಬಹಳ ಮುಖ್ಯ
ಬಡವ ನಾಳೆಯ ಚಿಂತೆಯನ್ನು ಮರೆತು
ಸವಿಯಾದ ನಿದ್ದೆ ಮಾಡುತ್ತಾನೆ
ಶ್ರೀಮಂತ ನಾಳೆ ಇನ್ನು ಯಾವ ವಿಧದಲ್ಲಿ
ಎಷ್ಟು ಸಂಪತ್ತನ್ನು ಒಟ್ಟುಗೋಡಿಸಬಹುದು
ಅನ್ನೋ 
ಏನು ಭಟ್ರೇ ಭಯಂಕರ ಡಯಾಲಾಗುಗಳು

ಹಸಿವೆಗೆ ಬಡವ ಶ್ರೀಮಂತ ಅನ್ನೋ
ಭೇದಭಾವ ಇಲ್ಲ
ಹಸಿವಾದಾಗ  ತಿನ್ನುವುದು ಆಹಾರವನ್ನ
ಶ್ರೀಮಂತನೆನು ಚಿನ್ನ  ತಿನ್ನೋಲ್ಲ
ಅಥವಾ  ಬಡವನೇನು  ಮಣ್ಣನ್ನು ತಿನ್ನೋಲ್ಲ


ಸೀರೆಯಲ್ಲಿ ನಾರಿ ಚಂದ
ಜೇನ್ಸ್ ನಲ್ಲಿ ಹೆಮ್ಮಾರಿ  ಹಂಗ

ಪ್ರೀತಿಯ ಪಯಣದಲ್ಲಿ  ಸಾವಿರಾರು
ಸಲ ಕಣ್ಣೀರು ಹಾಕಬೇಕಾಗಿ ಬಂದರೂ
... ಮನಸಾರೆ ಪ್ರೀತಿಸುವ
ಹೃದಯದಿಂದ ಯಾವತ್ತು ದೂರ ಆಗಬೇಡಿ

ಹುಟ್ಟು ಎಲ್ಲೋ ಸಾವು ಎಲ್ಲೋ
ಬದುಕಿನ ಪಯಣ ಎಲ್ಲಿಗೋ
ಆದರೆ ಪಯಣದ ದಾರಿಯಲ್ಲಿ
ಸಿಗುವ ಪ್ರೀತಿ ಸ್ನೇಹ ವಿಶ್ವಾಸ
ಮನಸ್ಸಿಗೆ ತುಂಬಾ ಹತ್ತಿರವಾಗುತ್ತೆ ಅಲ್ವಾ ?

ಎಷ್ಟೋ ನಿದ್ದೆ ಬಾರದ ರಾತ್ರಿಗಳನ್ನು 
ನಿನ್ನ ಗುಂಗಿನಲ್ಲಿ ಕಳೆದದ್ದಿದೆ 

ಒಮ್ಮೆಯಾದರೂ ನೀನು ಮಗ್ಗುಲು 
ಬದಲಿಸುವಾಗ ನನ್ನ ನೆನೆದದಿದ್ದೆಯೇ 

ಹೃದಯದ ತುಂಬೆಲ್ಲ ನೀನಿರುವಾಗ 
ಮಗ್ಗಲು ಬದಲಿಸುವಾಗ ಯಾಕೆ ನೆನೆಸಲಿ
ಎಲ್ಲಾದರೂ ಬಿದ್ದುಹೋದೆಯಾ ಎಂಬ ಭಯ !!!!

ಜನುಮಗಳ ಲೆಕ್ಕ ಏಕೆ ಗೆಳತಿ(ಯ)
ಇರುವ ಈ ಜನುಮವೇ ಸಾಕು
ನೀ ನನ್ನ ಪಳಗಿಸಿ
ನಾ ನಿನ್ನ ಪಳಗಿಸಿ
ಬದುಕ ಸರಿಹೊಂದಿಸಿಕೊಂಡು
ಈಗಷ್ಟೇ ಸುಧಾರಿಸಿಕೊಳ್ಳುತ್ತಿರುವಾಗ
ಮತ್ತೇಳು ಜನ್ಮದ ಹೆದರಿಕೆ ಹುಟ್ಟಿಸುವುದು ಸರಿಯೇ ....... ;))))))

ನಿನಗಾಗಿ ಕಾಯೋದು ನನ್ನ ಕೆಲಸ
ನನ್ನನ್ನು ಕಾಯಿಸೋದೆ ನಿನ್ನ ಕೆಲಸವಾಗಿದೆ 
ನಿನ್ನ ನೆನಪಿಲ್ಲದ ದಿನವಿಲ್ಲ , ನಿನ್ನ ಮರೆಯೋದು ಸಾಧ್ಯವಿಲ್ಲ 
ಯಾಕೆ ನೀ ದೂರವಾದೆ , ತಿಳಿಯದೆ ನಿನಗೆ ನನ್ನ ನೋವು 
ಕಾದಿಹೆನು ನಿನಗಾಗಿ ... ಒಮ್ಮೆ ಬಳಿಗೆ  ಬಾ ನೀನು 

ನನ್ನಳಾಗು  ನೀ ಚೆಲುವೆ 
ನಿನ್ನ ಬಯಕೆಯಲಿ ಬೆಂದಿಹೇನು ನಾನು 
ನಿನ್ನ ನೆನಪಲ್ಲೇ ಸಾಗುತಿಹೇನು ನಾನು 
ತೀರಿಸು ನನ್ನ ಬಯಕೆಯ ನೀನು
ಒಮ್ಮೆ ನನ್ನವಲಾಗು ನೀ ಚೆಲುವೆ 


ಪೆಟ್ರೋಲ್ ದರ ಏರಿಕೆಯಿಂದ ಜಗುಪ್ಸೆ 
ಕಾರು ಬಾವಿಗೆ ಬಿದ್ದು ಆತ್ಮಹತ್ಯೆ

ಈ ಭೂಮಿಯ ಮೇಲೆ
ಊಟ ಸಿಗದೆ ಕೊರಗುವವರಿಗಿಂತ
ಪ್ರೀತಿ ಸಿಗದೆ ಕೊರಗುವವರೇ ಜಾಸ್ತಿ...
ಮೊದಲ ನೋಟದಲ್ಲೇ ಮನಸ್ಸು ಕೊಟ್ಟೆ 
ಮೊದಲ ಭೇಟಿಯಲ್ಲೇ ಶಾಪಿಂಗ್ ಬಿಲ್ ಕೊಟ್ಟೆ 
ಬರ್ತ್ ಡೇ ಗಿಫ್ಟ್  ಅಂತ ಕ್ರೆಡಿಟ್ ಕಾರ್ಡ್ ಕೊಟ್ಟೆ 
ಪ್ರತಿಯಾಗಿ ನೀನೇನು ಕೊಟ್ಟೆ ?
ಲಗ್ನ ಪತ್ರಿಕೆ ಕೊಟ್ಟೆ 

ಕುಡಿದರೂ ತೂರಡದವನು ಬಾರಿನೋಳಗುತ್ತಮನು 
ಪತ್ನಿ ಬಾರಿಸಿದರೂ ಕುಯ್ಯೋ ಎನ್ನದವನು ಸಂಸಾರದೊಳಗುತ್ತಮನು 
ಮೇಷ್ಟರ ಕೋಲಿಗೆ ಜಗ್ಗದವ ಶಾಲೆಯೋಳಗುತ್ತಮನು 
ಪ್ರಿಯತಮೆ ಕೈ ಕೊಟ್ಟರೂ ನಗುತ್ತಾ ಬೇರೊಬ್ಬಳನ್ನು ಹುಡುಕುವವನು  ಪ್ರೆಮಿಗಳೊಳಗುತ್ತಮನು 

ಭಾವನೆಗಳಿಗೆ ಆಯುಷ್ಯವಿಲ್ಲ
ಅವು ನೀರ ಮೆಲಿನ ಗುಳ್ಳೆಯಂತೆ

ಜನುಮಗಳ ಲೆಕ್ಕ ಏಕೆ ಗೆಳತಿ(ಯ)
ಇರುವ ಈ ಜನುಮವೇ ಸಾಕು
ನೀ ನನ್ನ ಪಳಗಿಸಿ
ನಾ ನಿನ್ನ ಪಳಗಿಸಿ
ಬದುಕ ಸರಿಹೊಂದಿಸಿಕೊಂಡು
ಈಗಷ್ಟೇ ಸುಧಾರಿಸಿಕೊಳ್ಳುತ್ತಿರುವಾಗ
ಮತ್ತೇಳು ಜನ್ಮದ ಹೆದರಿಕೆ ಹುಟ್ಟಿಸುವುದು ಸರಿಯೇ ....... ;))))))


ನೀನಿಲ್ಲದ  ಮನಸ್ಸು ದೇವರಿಲ್ಲದ ಗುಡಿಯಂತೆ 
ನೀನಿಲ್ಲದ  ಬದುಕು ನೆರಳಿಲ್ಲದ ಮರಳುಗಾಡಿನಂತೆ
ಪ್ರೀತಿಯನು ನೀ ಚೆಲ್ಲು ಸೂರ್ಯನ  ಕಿರಣದಂತೆ 
ಅರಳುವೇನು ನಾನು ಕಮಲದ ಹೂವಿನಂತೆ 

ಹೊತ್ತು ಮುಳುಗುವ ಹೊತ್ತು, ಇಬ್ಬನಿ ಜಾರುತಲಿತ್ತು
ಇನಿಯೇ  ನಾ ಕಾದೆ ನಿನಗಾಗಿ, ಈ ಲೋಕವ ಮರೆತು 
ಗಂಟೆಗಳು ಉರುಳುತಿವೆ, ರವಿಯ ಕಿರಣ ಸರಿಯುತಿದೆ 
ಬಾ ನನ್ನ ನಲ್ಲೆ  ಎಲ್ಲಿರುವೆ ನೀ ...............
ಓ ಮುದ್ದು ಮನಸೇ........... 

 ನಯನವು ನೀ ಆಗುವುದಾದರೆ - ನೋಟ ನಾನಾಗುವೆ. ಹೃದಯದಿ ನೆಲಸುವುದಾದರೆ - ಬಡಿತವು ನಾನಾಗುವೆ. ಹೇಳು ನೀ ನನ್ನ ನಿನ್ನವನಾಗಿಸಿ ಕೊಳ್ಳುವೆಯ?  

ಯಾವ  ಮುರಳಿ ಮೋಹನ ಕರೆಯಿತೋ ದೂರ ತೀರಕೆ ನಿನ್ನನು 
ಯಾವ ಬೃಂದಾವನವು ಸೆಳೆಯಿತು ನಿನ್ನ  ಮಣ್ಣಿನ ಕಣ್ಣನು  ....

ಹೂವು ಹಾಸಿಗೆ ಚಂದ್ರ  ಚಂದನ  ಬಾಹು ಬಂಧನ ಚುಂಬನ 
ಬಯಕೆ ತೋಟದ  ಬೇಲಿಯೊಳಗೆ ಕರಣ ಗಣದಿರಂಗಣ 

ಸಪ್ತ  ಸಾಗರದಾಚೆಯೆಲ್ಲೋ ಸುಪ್ತಸಾಗರ ಕಾದಿದೆ 
ಮೊಳೆಯದಲೆಗಳ ಮುಖ  ಮರ್ಮರ  ಇಂದು ಇಲ್ಲಿಗೂ ಹಾಯಿತು 

ವಿವಶವಾಯಿತು ಪ್ರಾಣ  ... ಹಾ ..
ವಿವಶವಾಯಿತು ಪ್ರಾಣ ಹ ಪರವಶವು ನಿನ್ನೀ ಚೇತನ 

ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿವುದೇ ಜೀವನ 


ಅವಳು ಕೇಳಿದಳು ನನ್ನಿಂದ ಮುತ್ತ್ಯೆದೆ ಭಾಗ್ಯ
ನಾನೆಂದೆ.. 
ಕೊನೆಉಸಿರಿರುವ ತನಕ ನನ್ನ ಜೊತೆಗಿರು ಅದೇ ನನ್ನ ಭಾಗ್ಯ
ಇಲ್ಲಿಯವರೆಗೊ ಜೊತೆಗಿದ್ದು
ಸುಖ ದು:ಖ ದಲ್ಲಿ ಸಮಭಾಗಿಯಾಗಿದ್ದು 
ಉಸಿರಿರುವ ತನಕ ಜೊತೆಗಿರುವ ಮಾತುಕೊಟ್ಟು
ನನ್ನ ನಡು ನೀರಲ್ಲಿ ಬಿಟ್ಟು ಹೋಗುವೆಯಾ?
ನನ್ನೊಲವೆ ನನ್ನಾಶೆ ಏನೆಂದು ಕೇಳೆಯಾ?
ನನ್ನ ಹೃದಯ ಬಡಿತ ನೀನು, ನನ್ನ ಪ್ರಾಣ ನೀನು,ನನ್ನಿಸಿರು ನೀನು
ಸಾವು ಬರುವತನಕ,ಉಸಿರು ನಿಲ್ಲುವತನಕ,ದೇಹ ಉರುಳುವ ತನಕ
ನನ್ನ ಜೊತೆಗಿರಲಾರೆಯಾ ನೀನು ?

ಇದು ಖಂಡಿತ ಜೋಕ್  ಅಲ್ಲ ಮಾಳತಿಯವರೇ....ಹೃದಯಾಂತರಾಳದ ಮಾತು ... :-)

ನಿಮ್ಮ ಇಷ್ಟುದ್ದ ಪ್ರಳಬ್ದ ... ಅಯ್ಯೋ ... ಕ್ಷಮಿಸಿ ಪ್ರಭಂದ .... ಅದನ್ನು ಓದಿ ... ಹಾಗೆ ಮನಸ್ಸಲ್ಲಿ ಮೂಡಿದ ಭಾವನೆಗಳು :-)



ಚೆನ್ನಾಗಿದೆ ಮಾಳತಿಯವರೇ .... ಆದರೆ ನಿಮ್ಮದು ಮಾತು ಅತಿಯಾಯಿತು :-) ..... ನೀವೇ ಇಷ್ಟು ಮಾತಾಡೋವಾಗ ನಿಮ್ಮ ಪಕ್ಕ ಕೂತವರು ನಿಮ್ಮ ನಗು ಮುಖವನ್ನು ನೋಡಿ ಎಷ್ಟು ಖುಷಿಯಗ್ಲಿಕ್ಕಿಲ್ಲ ... ನಿಮ್ಮ ಮುಖ ನೋಡಿದ್ರೆ ನೋಡುವವರಿಗೆ ಮಾತು ತನ್ನಿಂದ ತಾನೇ ಬರುತ್ತೆ.
ಅಂದ ಹಾಗೆ ನೀವು ನಿಮ್ಮ ಕಣ್ಣು ಎಲ್ಲಿ ಪರೀಕ್ಷೆ ಮಾಡಿದ್ದು? ಹೇಗಿದೆ ನಿಮ್ಮ ದೃಷ್ಟಿ ?
ನಿಮಗೆ ಕನ್ನಡ ಇಷ್ಟು ಚೆನ್ನಾಗಿ ಬರಲು ಕಾರಣವೇನು? ಅಂದ ಹಾಗೆ ನೀವು ಶಾಲೆಯಲ್ಲಿ ಯಾವ ಸಬ್ಜೆಕ್ಟ್ ತಗೊಂಡಿದ್ದು? ನಿಮ್ಮ ಬರಹಗಳನ್ನು  ನೋಡಿದ್ರೆ ನೀವು ಶಾಲೆಯಲ್ಲಿ ಬಹಳ ಬುದ್ಧಿವಂತರಗಿದ್ರಿ ಅನ್ಸುತ್ತೆ ..ಅಲ್ವ? ಅದು ಬಿಡಿ , ಈಗ್ಲೂ ಕೂಡ ಬುದ್ಧಿವಂತೆಯೇ .... ಅಲ್ವ?

ಅಂದ ಹಾಗೆ ನಾನು ಬಂದದ್ದು ನಿಮ್ಮ ಬಳಿ ಏನೋ ಕೇಳೋಕೆ ಅಂತ ... ಏನು ಕೇಳೋಕೆ ಬಂದೆ ಅಂದ್ರೆ .... ಏನು ಕೇಳೋಕೆ ಬಂದೆ ? ಛೆ ನಿಮ್ಮತ್ರ ಮಾತಾಡ್ತ ಮಾತಾಡ್ತ ನಾನು ಕೇಳಬೇಕು ಅಂದುಕೊಂಡ ವಿಷಯನೇ ಮರೆತು ಹೋಯಿತು .... ಇನ್ನೊಮ್ಮೆ ನೆನಪು ಮಾಡ್ಕೊಂಡು ಕೇಳೋಕೆ ಬರ್ತೇನೆ ... ಅಲ್ಲಿಯವರಗೆ ಟಾಟ ... ಇನ್ನೊಮ್ಮೆ ಸಿಗೋಣ :-)


ಒಮ್ಮೆ ದೇವತೆಗಳು ಭಗವಂತನಲ್ಲಿ ಒಂದು ಪ್ರಶ್ನೆ ಕೇಳಿದರಂತೆ, "ದೇವಾ, ಕಲ್ಲಿಗಿಂತ ಬಲವಾದುದೆನಾದರೂ ಇದೆಯೇ?" ಭಗವಂತ ಉತ್ತರಿಸಿದ , "ಹೌದು, ಕಲ್ಲಿಗಿಂತ ಕಥಿನವಾದುದ್ದು  ಕಬ್ಬಿಣ, ಕಬ್ಬಿಣದಿಂದ ತಯಾರಾದ ಸುತ್ತಿಗೆ ಕಲ್ಲನ್ನೂ ಒಡೆದು ಪುಡಿ ಮಾಡಬಲ್ಲುದು." ದೇವತೆಗಳಿಗೆ ಆಶ್ಚರ್ಯವಾಯಿತು. ಮತ್ತೆ ಕೇಳಿದರು, "ಕಬ್ಬಿಣಕ್ಕಿಂತ ಶಕ್ತಿಯುತವಾದುದೆನಾದರೂ ಇದೆಯೇನು?", " ಹೌದು, ಬೆಂಕಿಯಲ್ಲಿ ಕಾಸಿದರೆ ಕಬ್ಬಿಣ ಕರಗಿ ನೀರಾಗುತ್ತದೆ. ಆದುದರಿಂದ ಕಬ್ಬಿಣ ಕರಗಿಸಬಲ್ಲ ಬೆಂಕಿ ಕಬ್ಬಿಣಕ್ಕಿಂತ ಶಕ್ತಿಯುತವಾದುದು.", "ಬೆಂಕಿಗಿಂತ, ಶಕ್ತಿಶಾಲಿಯಾದುದೂ ಎನಾದರೂ ಇರಬಹುದು ಅಲ್ಲವೇ?" ಎಂದರು ದೇವತೆಗಳು. "ಬೆಂಕಿ ಎಷ್ಟೇ ಬಲವತ್ತರವಾಗಿ ಉರಿಯಿತ್ತಿರಲಿ, ಅದನ್ನು ಆರಿಸುವುದು ನೀರು. ಆದುದರಿಂದ ನೀರು ಬೆಂಕಿಗಿಂತ ಬಲಶಾಲಿ" ಎಂದುತ್ತರ ಬಂತು.

"ಹಾಗಾದರೆ ನೀರಿಗಿಂತ ಬಲಶಾಲಿ ಯಾರು?" ಎಂದಾಯಿತು. "ನೀರನ್ನು ಹಾರಿಸಬಲ್ಲುದು ಗಾಳಿ. ಎಂಥ ಮಳೆ ಸುರಿಯುತ್ತಿದ್ದರೂ ವೇಗವಾಗಿ ಬೀಸುವ ಗಾಳಿ ಅದನ್ನು ಚದುರಿಸಬಲ್ಲುದು. ಆದುದರಿಂದ ನೀರಿಗಿಂತ ಗಾಳಿ ಬಲಶಾಲಿ" ಎಂದುತ್ತರಿಸಿದ ಭಗವಂತ. ಕಡೆಗೆ ಹೀಗೆ ಹೇಳಿದ, "ಇವೆಲ್ಲವೂ ಅವರವರ ಸ್ಥಾನದಲ್ಲಿ ಬಲಶಾಲಿಗಳೇ. ಆದರೆ, ಇವೆಲ್ಲದಕ್ಕಿಂತ ಬಲಶಾಲಿಯಾದುದು ಒಂದಿದೆ. ಅದು "ಮೈತ್ರಿ. ಅನುಕಂಪ,ಕರುಣೆ, ಪ್ರೇಮಗಳ ಸಮ್ಮಿಳಿತ ರೂಪವೇ "ಮೈತ್ರಿ". ಇದು ಸಮಸ್ತ ಚರಾಚರಗಳ ಮನೋಮೂಲದಲ್ಲಿದೆ. ಜಗತ್ತು ಶಾಂತಿಯಿಂದ ಬಾಳಬೇಕಾದರೆ ಇದು ಅತ್ಯಗತ್ಯ. ಮತ್ತೆ ಇದು ತನಗೆ ತಾನೇ ಮಾಡಿಕೊಳ್ಳುವ ಸೇವೆಯೂ ಹೌದು. ನಾನು ಬ್ರಹ್ಮ ಎಂದಾದರೆ ಸಮಸ್ತ ಜಗತ್ತಿನ ಅಣು ಅಣುವೂ ಬ್ರಹ್ಮನೇ. ಆದುದರಿಂದ ಈ 'ಬ್ರಹ್ಮ'ನ ಆರಾಧನೆಯೇ ಪ್ರಥಮ ಹಾಗೂ ಪ್ರಮುಖ ಪುಷ್ಪ. ಇದಕ್ಕಿಂತ ಪ್ರಬಲವಾದುದು ಯಾವುದು ಇಲ್ಲ" ಎಂದ ಭಗವಂತ.
===============================================================================================================
ಬಹಿರ್ನೋಟದ ಸಾಧನೆ ಹೇಗೆ ಇರಲಿ, ಅಂತರ್ಯ ಶುದ್ಧವಿರಲಿ 
ಮನುಷ್ಯರಲ್ಲಿ ಮೂರು ವಿಧವಂತೆ. ದೇವ, ಮನುಷ್ಯ, ದಾನವ. ಬಾಹ್ಯ ರೂಪದಲ್ಲಿ ಸಾಮ್ಯವಿದ್ದರೂ ಒಳಗಿನ ಗುಣಗಳಿಂದ ಈ ಭೇದ  ಉಂಟಾಗುತ್ತದೆ. ತನಗೆ ತೊಂದರೆಯಾದರೂ ಸರಿಯೇ, ಪರರಿಗೆ ಹಿತವಾಗಬೇಕು, ಸುಖ ಸಿಗಬೇಕು ಎನ್ನುವವ ದೇವತೆ. ನಾನು ನನ್ನಷ್ಟಕ್ಕೆ ಬದುಕುತ್ತೇನೆ, ನೀನು ನಿನ್ನಷ್ಟಕ್ಕಿರು ಅನ್ನುವವ ಮನುಷ್ಯ. ಇವನಿಗೆ ಹಿಂಸೆ, ನೋವುಗಳೆಂದರೆ ದೂರ. ಆದರೆ, ತನ್ನ ಸುಖವೇ ಮುಖ್ಯ. ಬೇರೆಯವರಿಗೆ ತೊಂದರೆ ಮಾಡದೆ ತನ್ನ ಸುಖದ ಆವರಣದಲ್ಲಿ ಸಿಹಿ ಮಾತಿನಿಂದಲೇ ತನಿಸುವವನಿವ. ಈಗ ನಮ್ಮಲ್ಲಿರುವ ಬಹುತೇಕ ಮಂದಿ ಈ ಗುಂಪಿನವರು. ನಮ್ಮ ಜೇಬಿನಿಂದ ಕಾಸು ಹೊರಹೊಗದಿದ್ದರಯಿತು. ನಮ್ಮ ನೆಮ್ಮದಿಗೆ ಭಂಗ ಬರದಿದ್ದರಾಯಿತು. ಟ್ರಾಫಿಕ್ ಜಾಮ್, ಕರೆಂಟು ಕಟ್, ಟ್ರೈನ್, ಪ್ಲೇನ್, ಲೈಟ್ ಗಳೆಲ್ಲ ಇವರಿಗೆ ಇರಿಸುಮುರಿಸಾಗುವ ವಿಷಯಗಳು. ತನ್ನ ಮಗು ಮೊದಲ ಸ್ಥಾನ ಬರಬೇಕು. ಇಷ್ಟಾದರೆ ಇವರು ಸುಖಿಗಳು. ದೇಶಕ್ಕೆ ಬೆಂಕಿ ಬೀಳಲಿ. ಪಕ್ಕದ ಮನೆ ಹೊತ್ತಿ ಉರಿಯಲಿ. ಬಾಯಿಮಾತಿನಲ್ಲಿ ಸಂತಾಪ ಸೂಚನೆಗೆ ತೊಂದರೆ ಇಲ್ಲ ಇಲ್ಲಿ !.

ಒಂದೂರಿನಲ್ಲಿ ಒಬ್ಬನಿದ್ದ. ಒಂದು ಸಲ ಯಾವುದೋ ಕಾರಣದಿಂದ ಭಗವಂತ ಇವನ ಮುಂದೆ ಬರುವಂತಾಯಿತು ಅಥವಾ ಇವನು ಭಗವಂತನ ಮುಂದೆ ಬಂದನೋ ತಿಳಿಯೆ. ಒಳ್ಳೆಯ ಮೂಡಿನಲ್ಲಿದ್ದ ಭಗವಂತ ಬೇಡಿದುದನ್ನು ನೀಡುವ ವರ ಕೊಟ್ಟ. ಇವನ ಕಲ್ಪನೆಗಳಿಗೆ ಗರಿ ತುಂಬಿತು. ದೊಡ್ಡ ಮನೆ, ಧನ - ಕನಕ, ಆರೋಗ್ಯ, ಆಯುಷ್ಯ ಎಲ್ಲವನ್ನೂ ಬೇಡಿದ. ನಾವೆಲ್ಲರೂ ಪ್ರತಿನಿತ್ಯ ಮಾಡುವುದೂ ಇದನ್ನೇ. ಇದು ಕೊಟ್ಟರೆ ಅದು ಬೇಕು, ಅದಿತ್ತರೆ ಮತ್ತೊಂದು ಬೇಕು ಎಂದು ನಿರಂತರವಾಗಿ ಬೇಡುವವರೇ ಅಆಗಿಹೊಗಿದ್ದೇವೆ. 

ಒಮ್ಮೆಯಾದರೂ ಬೇಡದೆ, ಅವನೇ ಅವನಾಗಿ ನೀಡುವ  ಸುಖವನ್ನು ಅನುಭವಿಸಿಯೇ ನೋಡಬೇಕು ! ಅವನ ನಿರಂತರ ಸಾನ್ನಿಧ್ಯವನ್ನೇ ನೀಡುತ್ತಾನವನು. ನಮ್ಮ ವಟ ವಟ ನಿಲ್ಲಿಸಿ, ಅವನ ಮಧುರತೆ ಆಲಿಸಬೇಕು ! ಜಗತ್ತಿನ ಸೃಷ್ಟಿಮೂಲದ ನಾದ ಕೇಳಬರುತ್ತದೆ ಆ 'ನಿಶ್ಯಬ್ದ'ದಲ್ಲಿ. ಭಗವಂತ ಒಂದು ಷರತ್ತು ಮುಂದಿಟ್ಟ - "ನೀನು ಬೇಡಿದುದೆಲ್ಲ ದುಪ್ಪಟ್ಟಾಗಿ ನಿನ್ನೂರಿನವರಿಗೂ ಲಭ್ಯವಾಗುತ್ತದೆ. ಸರಿಯೇ ?" ತನ್ನ ಬೇಡಿಕೆ ಈಡೇರಿದ ಸಂತೋಷದಲ್ಲಿ ಇವ ಒಪ್ಪಿದ.

ತನ್ನೂರಿಗೆ ಹೊರಟ. ನೋಡುವದೇನು? ಇವನ ಮಹಲು ಅತಿ ಚಿಕ್ಕ ಕಟ್ಟಡವಾಗಿದೆ. ಊರಿನಲ್ಲಿ ಸಂಪತ್ತು ಉಳಿದವರ ಅರ್ಧದಷ್ಟಿದೆ. ಒಂದೇ, ಎರಡೇ. ಎಲ್ಲವೂ ಬೇರೆಯವರಲ್ಲಿ ತನ್ನ ಎರಡು ಪಟ್ಟಿನಷ್ಟಿದೆ. ಅವನ ಮನಸ್ಸಿನಲ್ಲಿ ಅಸೂಯೆಯ ಜ್ವಾಲಾಮುಖಿ ಸಿಡಿಯಿತು. ಛೆ! ತನ್ನ ಮೇಲರಿಮೆಯಿಂದ ಉಳಿದವರ ಹೊಟ್ಟೆ ಉರಿಸಬೇಕೆಂದುಕೊಂಡರೆ, ತನ್ನ ಹೊಟ್ಟೆಯೇ ಉರಿಯುವನ್ತಾಯಿತಲ್ಲ!
  ಕೂಡಲೇ ದೇವರನ್ನು ಕೂಗಿ ಕರೆದ. ಕಾಯುತ್ತಿದ್ದ ಭಗವಂತ ಕಾರಣ ಕೇಳಲಿಕ್ಕಿಲ್ಲ ಇವನೆಂದ - "ನನ್ನ ಒಂದು ಕಣ್ಣನ್ನು ಕುರುಡು ಮಾಡು". ಇವನು ದಾನವ. ತನ್ನ ಒಂದು ಕಣ್ಣು ಹೋದರು ಚಿಂತಿಲ್ಲ , ತನ್ನ ಉಳಿದ  ವೈಭೋಗವನ್ನು ಉಳಿದ ಒಂದು ಕಣ್ಣಿನಿಂದಾದರು ಕಾಣುತ್ತೇನೆ. ಆದರೆ, ಇದರಿಂದ ಊರಿಗೆ ಊರೇ ಸಂಪೂರ್ಣ ಕುರುಡಗುತ್ತದಲ್ಲ !? ಇವರೂ ಏನನ್ನ್ನೂ ಕಾಣಲಾರರು, ಅನುಭವಿಸಲಾರರು! ಕಣ್ಣೇ ಇಲ್ಲದ ಮೇಲೆ ಏನಿದ್ದರೇನು ? ಹೀಗೆ  ತನಗೆ ತೊಂದರೆಯಾದರೂ ಸರಿಯೇ, ಪರರಿಗೆ ಪೀಡೆ ನೀಡಿ, ಸುಖಿಸುವವರು ಪರಪೀಡಕ ದಾನವರು.

ಪರರಲ್ಲಿ ತನ್ನನ್ನು ಕಾಣುವ ದೇವ, ತನ್ನಲ್ಲಿ ಮಾತ್ರ ಕಾಣುವ ಸಾಮಾನ್ಯ ಮನುಷ್ಯ. ತನ್ನಲ್ಲೂ ಪರರಲ್ಲಿ "ಅವನನ್ನು" ಕಾಣಲಾರದವ ದೈತ್ಯ ದಾನವ. ಇದಕ್ಕೆಲ್ಲ ಕಾರಣ 'ಅಹಂ'ಕಾರದ ಆವರಣ ಎನ್ನುತ್ತಾರೆ ಬಲ್ಲವರು. ಹೊರಗಿನ ಪ್ರಪಂಚದಲ್ಲಿ ನಮ್ಮ ಸಾಧನೆ ಏನೇ ಇರಲಿ, ಒಳಗಿನ ಆವರಣ ಶುದ್ಧವಾಗದೇ ಹೊರಗೂ ಫಲವಿಲ್ಲದ್ದು. ಹೊರಗಿನಿಂದ ದೇಹಕ್ಕೆ ಯಾವುದೇ ಸೌಂದರ್ಯ ಚಿಕಿತ್ಸೆ ಲೇಪ, ಮರ್ದನಗಳು ನಡೆದರೂ ಒಳಗಿನಿಂದ ರೋಗಗಳ ಗೂಡಾಗಿರುವವನಿಗೆ ಆರೋಗ್ಯವೆಲ್ಲಿಯದು! ಸಾಧಿಸುವುದೆಂತಿದೆನು? ಸುಲಭ ಆತ್ಮಶೋಧನೆ.

ಭಕ್ತಿ ನಂಬುಗೆ ಸುಲಭ, ಭಜನೆ ಸುಲಭ!
ತತ್ವ ಶೋಧನೆ ಕಷ್ಟ, ಮತಿಕಾರ್ಯ ಕಷ್ಟ!!
ಸುತ್ತುವುದು ಗಿರಿ ಸುತ್ತ ಸುಳುವೆಂದು ಲೋಕಜನ !
ಹತ್ತುವನೂ ತಾಪಸಿಯೋ - ಮಂಕುತಿಮ್ಮ !!


ನನ್ನ ಹುಡುಗಿಯರೆಲ್ಲ
ನನ್ನ ನೀರಲ್ಲೇ ಈಜಿ
ದಡ ಸೇರಿಕೊಂಡು,
ಸೇಫ್ ಆಗಿ ಮದುವೆ ಮಾಡಿಕೊಂಡು
ಎಸ್ಕೇಪ್ ಆಗಿ ಹೋದರು
ಆದರೆ, ಈಗಲೂ
ನಾನು ಅದೇ ಪಾಪದ
ಬ್ರಹ್ಮಚಾರಿ...
ಸೈಕಲ್ ಪೋರಿ ಸುಬ್ಬುಲೂ
ಬಸ್ಟಾಪ್ ಗೆಳತಿ ಕಮಲೂ
ಚಡ್ಡೀ ದೋಸ್ತ್ ಮೀನಾಕ್ಷಿ
ಸದಾ ಬಾಲ್ಕಾನಿ ರೂಪಾವತಿ
ಹೈಹೀಲ್ಡ್ ಕುಳ್ಳಿ ವಿಜೀ ಲಕ್ಷೀ
ಗಬ್ಬು ನಾತದ ಪರಿಮಳ
ಹೀಗೆ, ಅದು
ಪರಷ್ಕರಣೆ ಆಗುತ್ತಲೇ ಇದ್ದ
ಮತದಾರರ ಪಟ್ಟಿ!
ಎಲ್ಲರಿಗೂ ಮದುವೆಯಾದಾಗ
ಥೇಟ್! ಪರನಾರಿ ಸೋದರನಂತೆ
ಹರಸಿ ಒಬ್ಬಟ್ಟು ತಿಂದು ಬಂದೆ...
ಸದ್ಯಕ್ಕೆ...
ಹೋಟೆಲ್ ಮೇ ಖಾನಾ
ಆಯಿಲ್ ಮಿಲ್ ಮೇ ಸೋನಾ
ವರ್ತನೆಯಾಗಿ ಹೋಗಿದೆ
ಹುಡುಕಾಟ ಚಾಲ್ತಿಯಲ್ಲಿದೆ
ಹೊಸ ಗರ್ಲ್ ಫ್ರೆಂಡ್ಸಿಗೆ
ಅವರಿಗೂ,
ಮದುವೆ ಫಿಕ್ಸ್ ಆಗೋವರಗೆ!
ಕಾರಣವೇ ಇಲ್ಲದೆ ಕೆಲವರು ತುಂಬಾ ಇಷ್ಟ ಆಗ್ತಾರೆ.
ಕಾರಣ ಹೇಳದೆ ಕೆಲವರು ದೂರ ಆಗ್ತಾರೆ.
ಕಾರಣ ಹುಡುಕಿ ಹೊರಟಾಗ, ಕಾರಣ ಸಿಗದೇ ಇರೋದೇ ಜೀವನ ಅಂತಾರೆ 

ಅಮೇರಿಕಾದಲ್ಲಿ ಬಲು ಸಿರಿವಂತ ಭಾರತೀಯ ದಂಪತಿಗೊಬ್ಬ ಮಗನಿದ್ದ , ಬಲು ಪ್ರೀತಿಯಿಂದ ಅವನನ್ನು ಬೆಳೆಸಿದರು. ಅರಮನೆಯಂಥ ಮನೆ ಪೂರ್ತಿ ಹವನಿಯಂತ್ರಿತವಾಗಿತ್ತು. ಅತ್ಯಂತ ಬೆಲೆ ಬಾಳುವ ಬಟ್ಟೆ ಬರೆಗಳು,ಕಾರು, ಅತ್ಯುತ್ತಮ ಶಾಲೆಯಲ್ಲಿ ವಿದ್ಯಾಭ್ಯಾಸ ... ಹೀಗೆ ಹುಡುಗನಿಗೆ ಯಾವುದೇ ಕೊರತೆಯಾಗದಂತೆ ನೋಡಿಕೊಂಡಿದ್ದರು. ಹುಡುಗನ ತಂದೆ-ತಾಯಿಯ ಬಾಲ್ಯ ಹೀಗಿರಲಿಲ್ಲ. ಭಾರತದ ಸಾಮಾನ್ಯ ಕುಟುಂಬದಲ್ಲಿ ಹುಟ್ಟಿ, ಬೆಳೆದವರವರು ಇಂದು ಈ ಸುಖ ಭೋಗಗಳ ಮಧ್ಯದಲ್ಲಿಯೂ ಅವರು ತಮ್ಮ ಗತ ಜೀವನವನ್ನು ಮರೆತಿರಲಿಲ್ಲ. ತಮ್ಮ ಮಗನಿಗೂ ಇಂಥ ಜೀವನದ ಪರಿಚಯ ಮಾಡಿಸಬೇಕು ಎಂದು ಯೋಚಿಸಿದ ಅವರು, ಒಂದು ಬೇಸಿಗೆಯ ರಜೆಯಲ್ಲಿ ಹುಡುಗನನ್ನು ಭಾರತಕ್ಕೆ ಕರೆದುಕೊಂಡು ಬಂದರು.

ಒಂದು ಚಿಕ್ಕ ಹಳ್ಳಿಯಲ್ಲಿನ ತಮ್ಮ ಹಿರಿಯರ ಮನೆಯಲ್ಲಿ ಎರಡು ತಿಂಗಳು ಮಗನ ವಾಸ್ತವ್ಯಕೆ ಏರ್ಪಾಟು ಮಾಡಿ ಮರಳಿ ಹೋದರು. ಎರಡು ತಿಂಗಳುಗಳನ್ನ ಎರಡು ಯುಗಗಳಂತೆ ಕಳೆದು ಮಗನನ್ನು ಮರಳಿ ಕರೆದೊಯ್ಯಲು ಬಂದರು. ಹುಡುಗ ಒಪ್ಪಲಿಲ್ಲ. ಹೆತ್ತವರಿಗೆ ಆಶ್ಚರ್ಯ, ಆತಂಕ! ಅರೇ, ಅಂಥ ವೈಭೋಗದ  ಜೀವನಕ್ಕೆ ಮರಳಲು ನಿರಾಕರಿಸುತ್ತಿದ್ದನಲ್ಲ ! ಕಾರಣವೇನು ಎಂದುಕೊಂಡು ಹುಡುಗನಲ್ಲಿ ಕೇಳಿದರು. ಹುಡುಗನೆಂದ, " ನಮ್ಮ ಮನೆಯಲ್ಲಿ ಏನಿದೆ ? ನೀವಿಬ್ಬರು ಬೆಳಗ್ಗೆ ಹೋದರೆ ಬರುವುದು ಸಂಜೆ ಅನಂತರ. ಬಂದ ನಂತರವೂ ನಿಮ್ಮ ಕೆಲಸದ ಚರ್ಚೆ. ಎಲ್ಲಿಂದಲೋ ಯಾವಾಗಲೋ ತಂದು ಫ್ರಿಜ್ಜಿನಲ್ಲಿಟ್ಟ ಊಟ ಮಾಡುವುದು. ಒಂದಿಷ್ಟು ತಿನ್ನುವುದು! ಮತ್ತೆ ನಮ್ಮ ನಮ್ಮ ಹಾದಿ ನಮಗೆ. ಇಲ್ಲಿ ನೋಡಿ, ಇಡೀ ದಿನ ಒಬ್ಬರಲ್ಲ ಒಬ್ಬರು ಮನೆಯಲ್ಲೇ ಇರುತ್ತಾರೆ. ಮಾತುಕತೆ ಏನು? ಆಟವೇನು? ತೋಟ, ಗದ್ದೆ , ಹೊಲಗಳಲ್ಲಿ ಅಲೆದಾಟವೇನು? ಮರ ಹತ್ತಿ ಮಾವು, ಪೇರಳೆ, ನೆರಲೆಹಣ್ಣುಗಳನ್ನು 
ಕಿತ್ತು ತಿನ್ನುವ ಮಜವೇನು? ಎಲ್ಲರೂ ಒಟ್ಟಾಗಿ ಅದೇ ತಾನೆ ತಯಾರಿಸಿದ ಬಿಸಿ ಅಡುಗೆ ಉಣ್ಣುವ ಅನುಭವವೇನು ?

"ಇನ್ನು ವಿದ್ಯುತ್ ಕೈ ಕೊಟ್ಟಾಗ ಭೂತ-ಪ್ರೇತಗಳ ಕಥೆಗಳ ನೆನಪಾಗಿ ಹೆದರಿ, ಮುದುರಿಕೊಳ್ಳುವ ಅನುಭವವನ್ನು ಹೇಗೆ ವರ್ಣಿಸಲಿ ? ಆಗ ನಡೆವ ನೆರಳು-ಬೆಲಕಿನಾಟವನೆಉ? ನಮ್ಮ ಅಮೆರಿಕಾದ ಮನೆಯಲ್ಲಿ ಈಜುಕೊಳವಿದೆ. ಆದರೆ ಇಲ್ಲಿ ಹರಿವ ಈ ಶುಭ್ರ, ಸ್ವಚ್ಛ ತೊರೆಯಲ್ಲಿ ಈಜುವ, ಮೀನುಗಳೊಡನೆ ಆಟ ಆಡುವ ಆನಂದ ಅಲ್ಲಿಲ್ಲವಲ್ಲ ! ಬೈಕಿನಲ್ಲಿ ರೊಂಯ್ಯನೆ ಪಯಣಿಸುವಾಗ ಸಿಗುವ ರೋಮಾಂಚನ, ಆಟೋರಿಕ್ಷಾಗಳು ರಸ್ತೆಯಲ್ಲಿ ಗಡಬಡಿಸುತ್ತಾ ಓಡಾಡುವಗಿನ ಅನುಭವ, ಒಂದೇ ಎರಡೇ. ಇಲ್ಲಿಯ ವೈವಿಧ್ಯತೆ ಪ್ರತಿಕ್ಷಣ ಒಂದು ಅನೂಹ್ಯ ಅನುಭವದ ಗಣಿ ಈ ದೇಶ. ಇದನ್ನು ಕಳೆದುಕೊಳ್ಳಲು ನಾ ಬಯಸುವುದಿಲ್ಲ"

Tuesday, July 6, 2010